ಇರಾನ್ನ ಪರಮೋಚ್ಚ ನಾಯಕ ಮೊಜ್ತಾಬಾ ಖಮೇನಿ ಅವರು ಕೋಮ್ನಲ್ಲಿ ವೈದ್ಯಕೀಯ ಚಿಕಿತ್ಸೆ ಪಡೆಯುತ್ತಿದ್ದಾರೆ ಮತ್ತು ಪ್ರಜ್ಞಾಹೀನ ಸ್ಥಿತಿಯಲ್ಲಿದ್ದಾರೆ ಎಂದು 'ದಿ ಟೈಮ್ಸ್' ವರದಿ ಮಾಡಿದೆ. ರಾಜತಾಂತ್ರಿಕ ಟಿಪ್ಪಣಿಯ ಆಧಾರದ ಮೇಲೆ ಈ ವರದಿ ಮಾಡಲಾಗಿದೆ.
ಅಮೆರಿಕ ಮತ್ತು ಇಸ್ರೇಲ್ ಹಂಚಿಕೊಂಡ ಗುಪ್ತಚರ ಮಾಹಿತಿಯ ಆಧಾರದ ಮೇಲೆ ಈ ಅಂದಾಜನ್ನು ಮಾಡಲಾಗಿದೆ ಎಂದು ವರದಿಯಲ್ಲಿ ಹೇಳಲಾಗಿದೆ.
ಇದನ್ನೂ ಓದಿ: ಪಶ್ಚಿಮ ಬಂಗಾಳ SIR | 91 ಲಕ್ಷ ಮತಾರರ ಹೆಸರುಗಳು ಡಿಲೀಟ್!
ವರದಿಯ ಪ್ರಕಾರ, ಖಮೇನಿ ಅವರ ಸ್ಥಿತಿ 'ಗಂಭೀರ'ವಾಗಿದ್ದು, ಅವರು ಆಡಳಿತ ಅಥವಾ ನಿರ್ಧಾರ ಕೈಗೊಳ್ಳುವಲ್ಲಿ ಪಾಲ್ಗೊಳ್ಳಲು ಸಾಧ್ಯವಾಗುತ್ತಿಲ್ಲ. ಮೊದಲ ಬಾರಿಗೆ ಮೊಜ್ತಬಾ ಇರುವ ಸ್ಥಳವನ್ನು ಈ ಟಿಪ್ಪಣಿಯಲ್ಲಿ ಗುರುತಿಸಲಾಗಿದೆ.
ಈ ವರದಿಯ ಸತ್ಯಾಸತ್ಯತೆಗೆ ಸಂಬಂಧಿಸಿದಂತೆ ಅಮೆರಿಕದ ರಾಷ್ಟ್ರೀಯ ಭದ್ರತಾ ಸಂಸ್ಥೆ (NSA) ಮತ್ತು ವಾಷಿಂಗ್ಟನ್ನಲ್ಲಿರುವ ಪಾಕಿಸ್ತಾನಿ ರಾಯಭಾರ ಕಚೇರಿಯ ಮೂಲಕ ಕಾರ್ಯನಿರ್ವಹಿಸುವ ಇರಾನ್ನ ರಾಜತಾಂತ್ರಿಕ ಪ್ರತಿನಿಧಿಗಳನ್ನು ಸಂಪರ್ಕಿಸಲಾಗಿದೆ ಎಂದು ಅದು ಹೇಳಿದೆ.
ಪಶ್ಚಿಮ ಏಷ್ಯಾದಲ್ಲಿ ಸಂಘರ್ಷ ಉಲ್ಬಣಗೊಂಡ ನಂತರ ಖಮೇನಿ ಸಾರ್ವಜನಿಕವಾಗಿ ಎಲ್ಲಿಯೂ ಕಾಣಿಸಿಕೊಂಡಿಲ್ಲ. ಅವರ ಹೆಸರಿನಲ್ಲಿ ಬರುವ ಹೇಳಿಕೆಗಳನ್ನು ಸರ್ಕಾರಿ ಮಾಧ್ಯಮಗಳ ಮೂಲಕ ಪ್ರಸಾರ ಮಾಡಲಾಗುತ್ತಿದೆ.
ಇದನ್ನೂ ಓದಿ: Green Asha | ಹಾರ್ಮುಜ್ ದಾಟಿದ ಭಾರತದ 8ನೇ ಹಡಗು
ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಇರಾನ್ಗೆ ಒಪ್ಪಂದ ಮಾಡಿಕೊಳ್ಳಲು ಮಂಗಳವಾರ ರಾತ್ರಿ 8 ಗಂಟೆಯವರೆಗೆ ಗಡುವು ನೀಡಿದ ಬೆನ್ನಲ್ಲೇ ಈ ವರದಿ ಬಂದಿದೆ. 'ಒಪ್ಪಂದ ಮಾಡಿಲ್ಲವೆಂದರೆ ಇರಾನ್ನ ಯಾವುದೇ ಸೇತುವೆಗಳು ಅಥವಾ ವಿದ್ಯುತ್ ಸ್ಥಾವರಗಳು ಉಳಿಯುವುದಿಲ್ಲ' ಎಂದು ಅವರು ಎಚ್ಚರಿಸಿದ್ದಾರೆ.
ವೈಟ್ ಹೌಸ್ನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಟ್ರಂಪ್, ಇದು 'ನಿರ್ಣಾಯಕ ಸಮಯ' ಮತ್ತು ಯುದ್ಧವನ್ನು ಕೊನೆಗೊಳಿಸಲು ಒಪ್ಪಂದ ಮಾಡಿಕೊಳ್ಳಲು ಇರಾನ್ಗೆ ಅತ್ಯಗತ್ಯ ಸಮಯ ನೀಡಲಾಗಿದೆ ಎಂದು ಹೇಳಿದ್ದಾರೆ.
'ಇದು ನಿರ್ಣಾಯಕ ಸಮಯ... ಅವರು ಏಳು ದಿನಗಳ ಕಾಲಾವಕಾಶ ಕೇಳಿದ್ದರು, ನಾನು 10 ದಿನ ನೀಡಿದ್ದೇನೆ. ಅವರಿಗೆ ನಾಳೆಯವರೆಗೆ ಸಮಯವಿದೆ. ಏನಾಗುತ್ತದೆ ಎಂದು ನೋಡೋಣ. ನಾಳೆ ರಾತ್ರಿ 8 ಗಂಟೆಯ ನಂತರ ಅವರ ಬಳಿ ಸೇತುವೆಗಳಾಗಲಿ ಅಥವಾ ವಿದ್ಯುತ್ ಸ್ಥಾವರಗಳಾಗಲಿ ಇರುವುದಿಲ್ಲ. ಅವರನ್ನು ಶಿಲಾಯುಗಕ್ಕೆ ತಳ್ಳಲಾಗುವುದು' ಎಂದು ಟ್ರಂಪ್ ಎಚ್ಚರಿಸಿದ್ದರು.
ಇದನ್ನೂ ಓದಿ: ಅಫ್ಗನ್ ಭೂಕಂಪ ಪೀಡಿತರಿಗೆ ಭಾರತ ನೆರವು

Comments
Post a Comment